“ಕಬಾಲಿ ಡಾ” ಅನ್ನೋದ್ನ ಕೇಳೋಕೆ ಸೂಪರ್!

kabali

(pc: Internet)

ಕಬಾಲಿ ಭಾರಿ ಗದ್ದಲದಲ್ಲಿ ಬಿಡುಗಡೆಯಾಗಿದೆ. ಆ ಮೂಲಕ ಕನ್ನಡನಾಡಿಗೆ ಬಲುದೊಡ್ಡ ಉಪಕಾರ ಮಾಡಿ, ನಿಜವಾದ ಕನ್ನಡಿಗನಿಗೆ ಸರಿ ತಪ್ಪು ಆಲೋಚನೆ ಮಾಡೋಕೆ ಅನುವು ಮಾಡಿಕೊಟ್ಟಿದೆ. ಕನ್ನಡಪರರೆಂದು ನಾಟಕವಾಡುತ್ತಿರುವ ಕತ್ತೆ, ನಾಯಿ ಕಟ್ಕೊಂಡು ಹೋರಾಡೋ ಹೋರಾಟಗಾರರ ಸೋಗಲಾಡಿತನವನ್ನೂ, ಒಂದೆಡೆ ನಾಡುನುಡಿಯ ರಕ್ಷಣೆಯ ಹರಿಕಾರನಂತೆ ತೋರಿಸಿಕೊಂಡು ಊರವರನ್ನೆಲ್ಲಾ ತರಾಟೆಗೆ ತೊಗೊಂಡು ಝಾಡಿಸುತ್ತಾ ಮತ್ತೊಂದೆಡೆ ಇಪ್ಪತ್ನಾಲ್ಕು ಗಂಟೇನೂ ಕಬಾಲಿ ಕಬಾಲಿ ಅಂತಾ ಕವಾಲಿ ಹಾಡ್ತಿರೋ ಟಿವಿ ವಾಹಿನಿಗಳವರ ಬೂಟಾಟಿಕೆಯನ್ನೂ, ಸಿನಿಮಾದಲ್ಲಿ ಕನ್ನಡ ಕನ್ನಡ ಅಂತಾ ಬಡ್ಕೊಂಡು ಮೊದಲದಿನವೇ ತಮಿಳು ಸಿನಿಮಾ ನೋಡಿ ಧನ್ಯತೆಯಿಂದ ತೇಲಾಡುತ್ತಿರುವ ಬಣ್ಣದ ನಾಯಕ ಮಂದಿಯ ಬಣ್ಣವನ್ನೂ ಕಳಚಿ ನಿಜವಾದ ತೊಗಲಿನ ದರ್ಶನ ಮಾಡಿಸಿದೆ. ಹಾಗಾಗಿ ಕಬಾಲಿಯ ರಜನಿಕಾಂತ್ “ಕಬಾಲಿ ಡಾ” ಅನ್ನೋದನ್ನು ಕಂಡಾಗೆಲ್ಲಾ ಒಂಥರ ಪುಳಕ! ಹಿಗ್ಗು!

ಪಾಪ! ನಮ್ಮ ನಟರದ್ದೇನೂ ತಪ್ಪಿಲ್ಲಾ ಬಿಡಿ. ಅವರದ್ದು ಹೇಗಿದ್ದರೂ ತೆರೆಯ ಮೇಲಿನ ನಾಟಕದ ಕನ್ನಡಪ್ರೇಮ. ತೆರೆಯ ಹಿಂದೂ ಅದೇ ಕನ್ನಡಪರತೆ ಇರಬೇಕು ಎಂದರೆ ಹೇಗೆ? ಅವರ ಕೈಯ್ಯಲ್ಲಿ ಕನ್ನಡ ಬಾವುಟ ಹಾರಾಡಿದ್ದೂ, ಕನ್ನಡ ಕನ್ನಡ ಅಂತಾ ಹಾಡಿ ಕುಣಿದಿದ್ದೂ ಅಭಿಮಾನದಿಂದಲ್ಲ, ನಿರ್ಮಾಪಕರು ಕೊಡೋ ಕಾಸಿಗಾಗಿ ಅನ್ನೋದನ್ನು ಅರ್ಥಮಾಡಿಕೊಳ್ಳದೆ ಅವರು ಅಂದಿದ್ದನ್ನೆಲ್ಲಾ ದಿಟವೆಂದು ನಂಬಿ… ಊರೂರಲ್ಲಿ ಕರೆದು ಸಂಘ ಕಟ್ಟಿಕೊಂಡು ಸನ್ಮಾನ ಮಾಡಿ ಬಿರುದು ಬಾವಲಿಗಳನ್ನಿತ್ತು ಮಂಗಗಳಾಗಿರೋ ಅಭಿಮಾನಿ ದೇವರುಗಳದ್ದು! ಇವರು ಡಬ್ಬಿಂಗ್ ವಿರುದ್ಧ ಗುಡುಗಿದರೆ ಅದು ಕನ್ನಡದ ಉಳಿವಿಗಾಗಿ ಎಂದು ನಂಬೋ ಮುಗ್ಧರೂ ಕೂಡಾ ಈಗೀಗ ಅದೆಲ್ಲಾ ತಮ್ಮ ಪರಭಾಷಿಕ ಉದ್ಯಮಿ ಗೆಳೆಯರ ಗೆಳೆತನಕ್ಕಾಗಿ, ತಮ್ಮ ಉದ್ದಿಮೆಯಲ್ಲಿನ ಸ್ವಹಿತಾಸಕ್ತಿಯ ಹತೋಟಿಕೂಟದ ಹಿತಕಾಪಾಡಲು ತೊಡುವ ಮೇಕಪ್ಪುಗಳು ಮಾತ್ರಾ ಅನ್ನೋದನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಇನ್ನು ನಮ್ಮೂರಿನ ಟಿವಿಗಳದ್ದೂ ತಪ್ಪಿಲ್ಲ! ಅವುಗಳ ಮಾಲಿಕರೋ, ಪಾಲುದಾರರೋ ಮತ್ಯಾರೋ ಸ್ವಜನರು ಕಷ್ಟಪಟ್ಟು ಕಾಸು ಹಾಕಿ ಸಿನಿಮಾ ತೆಗೆದಾಗ ಅದನ್ನು ಪ್ರಚಾರ ಮಾಡೋದು ತಪ್ಪಾ? ಅನ್ನವಿಡುವ ಯಜಮಾನರು ಹಾಕಿದ ಗೆರೆ ದಾಟಿ ಕನ್ನಡನಾಡಿನ, ಕನ್ನಡ ಚಿತ್ರರಂಗದ ಹಿತ ಕಾಪಾಡಬೇಕು ಅಂತಾ ಅಂದುಕೊಳ್ಳೋಕೆ ಅವರಿಗೆಲ್ಲಾ ಹುಚ್ಚುನಾಯಿ ಕಡಿದಿಲ್ಲಾ ಅಲ್ವಾ? ಇಷ್ಟಕ್ಕೂ ಅಂಥಾ ಸಿನಿಮಾಗಳ ಬಗ್ಗೆ ಟಿವಿಯಲ್ಲಿ ಕೂತು ಮಾತಾಡಿ “ಇದು ಅತ್ಯದ್ಭುತ! ಇದಕ್ಕೆ ಸಮನಿಲ್ಲ! ಕಲೆಗೆ ಭಾಷೆಯಿಲ್ಲಾ ಅನ್ನೋದನ್ನು ಇದು ತೋರಿಸಿದೆ” ಅಂತೆಲ್ಲಾ ಭಜನೆ ಮಾಡುವ ಹೊಗಳುಭಟ ಪತ್ರಕರ್ತ ಕತೆಗಾರರೂ ಇದಕ್ಕಾಗೇ ಟಿವಿಗಳ ಬಾಗಿಲಲ್ಲಿ ತುದಿಗಾಲಲ್ಲಿ ಕಾಯ್ತಾ ನಿಂತಿದ್ದಾರಲ್ಲಾ! ಅಂಥದ್ರಲ್ಲಿ ಟಿವೀಲಿ ಕಬಾಲಿ ಕಬಾಲಿ ಅಂತ ಇವರು ಜಪಿಸದೇ ಇರೋಕೆ ತಾನೇ ಹೇಗೆ ಸಾಧ್ಯ?

ತಾನು ಕನ್ನಡಪರ ಅನ್ನುತ್ತಾ ಕಬಾಲಿ ಸಿನಿಮಾ ಟಿಕೆಟ್ಟಿಗೆ ಬೆಲೆ ಜಾಸ್ತಿ, ನೂರು ರೂಪಾಯಿಗೆ ಟಿಕೆಟ್ ಕೊಡಬೇಕು ಅನ್ನುತ್ತಾ ಮುನ್ನೂರು ಟಾಕೀಸಿನಲ್ಲಿ ಸಿನಿಮಾ ಬಿಡುಗಡೆ ಆದ ಮೇಲೆ ಗೊಂಬೆ ಸುಡುವ ನಾಯಿಪಡೆ ಹೋರಾಟಗಾರರದ್ದೂ ತಪ್ಪಿಲ್ಲಾ ಬಿಡಿ. ಕನ್ನಡಿಗರು ಕಬಾಲಿಯನ್ನು ತಮಿಳು, ತೆಲುಗು, ಹಿಂದೀ ಭಾಷೆಗಳಲ್ಲಿ ನೋಡಲಿ.. ಆದರೆ ಕನ್ನಡದಲ್ಲಿ ಮಾತ್ರಾ ನೋಡುವುದನ್ನು ಸಹಿಸುವುದಿಲ್ಲಾ…. ಇದರಿಂದ ಕನ್ನಡ ಸಂಸ್ಕೃತಿ, ಭಾಷೆ, ಸಾಹಿತ್ಯಗಳಿಗೆ ಧಕ್ಕೆ ಬರುತ್ತೆ ಅಂತಾ ತಾನೇ ಇವರು ವಿರೋಧ ಮಾಡ್ತಿರೋದು!

ಕಬಾಲಿ ಚಿತ್ರದಿಂದ ಈ ಮೂರೂ ಮಂದಿಯ ಬಣ್ಣ ಬಯಲಾಗಿದೆ. ಕನ್ನಡ ಉಳಿಸೋಕೆ ತಮಿಳು, ತೆಲುಗು , ಹಿಂದೀಲಿ ಸಿನಿಮಾ ನೋಡಿ ಅನ್ನುವ ನಗೆಪಾಟಲಿನ ಮಾತಾಡೋ ಈ ಹೋರಾಟಗಾರರು ಇಷ್ಟು ವರ್ಷ ಮಾಡಿದ ಪ್ರಹಸನಗಳ, ಕನ್ನಡದ ಹೆಸರಲ್ಲಿ ಮಾಡಿದ ಹೋರಾಟಗಳ ನಿಜಾಯಿತಿ ಜನರಿಗೆ ಅರ್ಥವಾಗುತ್ತಿದೆ. ನಮ್ಮದು ಅಂದುಕೊಂಡ ಟಿವಿಗಳು ನಿಜಕ್ಕೂ ನಮ್ಮವಲ್ಲಾ! ಇವರ ಕನ್ನಡಪ್ರೇಮವೆಲ್ಲಾ ಬರೀ ಟಿಆರ್ಪಿ ಹೆಚ್ಚಿಸಲು ಬಳಕೆಯಾದ “ಸೋಪು ಧಾರಾವಾಹಿ” ಅನ್ನೋದು ಜನಕ್ಕೆ ಗೊತ್ತಾಗಿದೆ. ಇನ್ನು ಸಿನಿಮಾದ ಮಂದಿಯ ಕನ್ನಡ ಪ್ರೇಮ ನಮ್ಮ ಭಾವನೆಯನ್ನು ಕೆರಳಿಸಿ ಕಾಸು ಮಾಡೋ ಸರಕು ಅಂತಾನೂ ಜನರಿಗೆ ಗೊತ್ತಾಗಿದೆ.

ರಜನೀಕಾಂತ್ “ಕನ್ನಡಿಗರೇ, ನಿಮ್ಮ ಜನಗಳ ಬಂಡವಾಳಾನಾ ಹೆಂಗೆ ಬಯಲು ಮಾಡ್ದೆ. ನಾನು ಕಬಾಲಿ ಡಾ” ಅನ್ನೋದು ಸೂಪರ್ರಾಗೇ ಇದೆ! ಹಾಗಾಗಿ, ಕಬಾಲಿಗೆ ಒಂದು ಥ್ಯಾಂಕ್ಸು!!

 

Advertisements

Posted on July 22, 2016, in ಗುಂಪಿಸದ್ದು and tagged , , . Bookmark the permalink. 5 Comments.

 1. Super Guru , kennege hodadaange bardideeya. Unfortunate thing is yaaarge talupabeko avru care madalla 😐

 2. William Dsouza

  ಒಂದು ಒಳ್ಳೆಯ ಸಿನೆಮಾ ಮಾಡುವ ಯೋಗ್ಯತೆ ಇಲ್ಲ ಕನ್ನಡದವರಿಗೆ..
  ಹೀರೊಯಿನ್..ವಿಲ್ಲನ್ ..ಸಿಂಗರ್ಸ್..ಎಲ್ಲರೂ ಹೊರಗಿನವರು.
  ಹೀರೊ ಮಾತ್ರ ಕನ್ನಡವನು ..
  ಕನ್ನಡ ಕನ್ನಡ ಅಂತ ಸಾಯುವವರು ರಿಮೇಕ್ ಯಾಕೆ ಮಾಡಬೇಕು.
  ವಾಟಾಳ್ ನಾಗರಾಜ್ ಗೆ ತಲೆ ಕೆಟ್ಟು ಹೋಗಿದೆ.
  ಇವರಿಗೆ ಕನ್ನಡ ಪ್ರೇಮವಲ್ಲ ಇತರ ಭಾಷೆಯ ಸಿನೆಮಾ ಇದ್ರೆ ಕನ್ನಡ ಸಿನೆಮಾ ಯಾರು ನೋಡುವುದಿಲ್ಲ ಅಂತ ಭಯ.

 3. ಮಂಜುನಾಥ

  ಅಭಿಮಾನಿ ದೇವರು ಅನ್ನಿಸಿಕೊಂಡವನು ಬುದ್ಧಿವಂತ ಆಗಿರಬೇಕು.

 4. ಚಿರಂಜೀವಿ

  ಕನ್ನಡದವರಿಗೆ ಸ್ವಮೇಕ್ ಚಿತ್ರ ಮಾಡೋಕಾಗಲ್ಲ ಅಂತಲ್ಲ,
  ಎಷ್ಟೋ ಜನ ಕಥೆಗಳನ್ನ ಇಟ್ಟುಕೊಂಡು ಕಾಯ್ಥ ಇದ್ದಾರೆ,
  ಅಂಥವರಿಗೆ ಅವಕಾಶ ಸಿಗ್ತಾಎಲ್ಲ,

  ಅವಕಾಶ ಇದ್ದೋರು ಸ್ವಮೇಕ್ ಮಾಡ್ತಾ ಎಲ್ಲ,
  ಸ್ವಮೇಕ್ ಚಿತ್ರ ಯದ್ಯಾವ್ದು ಬಂದಿದ್ಯೋ ಅವೆಲ್ಲ ಬಹುಪಾಲು ಯಶಸ್ಸನ್ನು ಕಂಡಿದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: