“ಒಂದು ದೇಶ: ಒಂದು ಚುನಾವಣೆ” – ಒಕ್ಕೂಟ ಮತ್ತು ಪ್ರಜಾಪ್ರಭುತ್ವಕ್ಕೆ ಮಾರಕ

“ಒಂದು ದೇಶ ಒಂದು ಚುನಾವಣೆ”ಗೆ ಕೊಡುವ ಪ್ರಮುಖ ಕಾರಣಗಳು – ಚುನಾವಣೆಗಳಿಗೆ ಹೆಚ್ಚು ವೆಚ್ಚ ತಗಲುತ್ತದೆ, ಚುನಾವಣಾ ನೀತಿಸಂಹಿತೆ ಜಾರಿಯಾಗಿ ಅಭಿವೃದ್ಧಿ ಕಾರ್ಯಗಳು ಕುಂಟುತ್ತವೆ ಎನ್ನುವುದು.

ಆದರೆ ವಾಸ್ತವವಾಗಿ ಇದು ಪ್ರಾದೇಶಿಕ ಪಕ್ಷಗಳನ್ನು ಸರ್ವನಾಶ ಮಾಡುವ ಅತಿ ಮುಖ್ಯವಾದ ಹೆಜ್ಜೆ. ಕೇಂದ್ರದ ಮತ್ತು ರಾಜ್ಯದ ಚುನಾವಣೆಗಳಲ್ಲಿ ಜನರ ಮುಂದಿಡಬೇಕಾದ ವಿಷಯಗಳು ಬೇರೆ ಬೇರೆ. ರಾಜ್ಯದ ಸಮಸ್ಯೆಗಳು ನಗಣ್ಯವಾಗಿ ಕೇಂದ್ರದ ವಿಷಯಗಳೇ ಚುನಾವಣೆಯ ವಿಷಯವಾಗಿ ಮತದಾನದ ಮಾನದಂಡವೇ ಬದಲಾಗುತ್ತದೆ. ಯಾವ ಪ್ರಾದೇಶಿಕ ಪಕ್ಷವೂ ರಾಷ್ಟ್ರಮಟ್ಟದ ಸಮಸ್ಯೆಗೆ ಒಬ್ಬಂಟಿಯಾಗಿ ಪರಿಹಾರ ನೀಡಲು ಆಗದ ಕಾರಣ ಸಹಜವಾಗಿ ಮತದಾರ ರಾಷ್ಟ್ರೀಯ ಪಕ್ಷಕ್ಕೆ ಮತ ಒತ್ತುತ್ತಾನೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳು ಇಲ್ಲವಾಗುವುದು ಶತಃಸಿದ್ಧ.

ಒಮ್ಮೆ ಯೋಚಿಸಿ.. ಕರ್ನಾಟಕದ ವಿಧಾನಸಭೆ ಚುನಾವಣೆಯ ವಿಷಯ ರಾಷ್ಟ್ರೀಯ ಭದ್ರತೆ, ನೋಟು ಬೆಲೆ ಅಳಿಕೆ, ರಾಮಮಂದಿರ ಇವುಗಳ ಕೇಂದ್ರಿತ ಆಗಿರಬೇಕೇ ಅಥವಾ ಮಹಾದಾಯಿ, ಕಲಿಕೆಯ ಮಾಧ್ಯಮ, ಗಣಿ ಲೂಟಿ ಅಂತಹ ವಿಷಯಗಳ ಕೇಂದ್ರಿತ ಆಗಿರಬೇಕೇ?ಒಂದು ದೇಶ ಒಂದು ಚುನಾವಣೆ.. ಭಾರತದ ಒಕ್ಕೂಟ ವ್ಯವಸ್ಥೆಯನ್ನು ಅಳಿಸುವ, ಅಮೇರಿಕಾದಂತಹ ಎರಡೇ ಪಕ್ಷಗಳ ರಾಜಕಾರಣದ ಕಡೆಗಿನ ದಾಪುಗಾಲು.. ರಾಜ್ಯಗಳು ಎಚ್ಚೆತ್ತುಕೊಳ್ಳದೆ ಇದ್ದರೆ ಪ್ರಾದೇಶಿಕ ಪಕ್ಷಗಳು ಮತ್ತು ರಾಜ್ಯಗಳ ಹಿತ ಎನ್ನುವುದು ಮಣ್ಣು ಮುಕ್ಕಬೇಕಾಗುತ್ತದೆ.

ಸರ್ಕಾರ ಹೊಸ ಪದ್ದತಿ ಜಾರಿ ಮಾಡಲು ಮುಂದಾದರೆ ಎದುರಿಸಬೇಕಾದ ದೊಡ್ಡ ಸಮಸ್ಯೆ.. ಎರಡರಲ್ಲಿ ಒಂದು ಸರ್ಕಾರ ಯಾವುದೇ ಕಾರಣದಿಂದ ಬಿದ್ದು ಹೋದರೆ ಏನು ಮಾಡಬೇಕು ಎನ್ನುವುದು. ಉಳಿದ ಅವಧಿಗೆ ರಾಷ್ಟ್ರಪತಿ ಆಳ್ವಿಕೆ ಅಥವಾ ಅಧಿಕಾರ ಕಳೆದುಕೊಂಡ ಪಕ್ಷದ ನಂತರದ ಸ್ಥಾನದಲ್ಲಿರುವ ಪಕ್ಷದ ಅಲ್ಪಮತದ ಸರ್ಕಾರ ಸರ್ಕಾರ ಮಾಡುವುದು. ಇವೆರಡೂ ಕೂಡಾ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ವಿರುದ್ಧವಾಗಿ ಇರುವಂಥ ಪರಿಹಾರಗಳು.

ಚುನಾವಣೆಗೆ ವೆಚ್ಚ ಹೆಚ್ಚುತ್ತೆ ಎನ್ನುವುದು ಹೇಗೆಂದರೆ ಊಟ ಮಾಡಿದರೆ ಅಕ್ಕಿ ಕರ್ಚಾಗುತ್ತದೆ, ಹಾಗಾಗಿ ಉಪವಾಸ ಮಾಡಬೇಕು ಅಂದ ಹಾಗೆ.. ಹಾಗೆ ವೆಚ್ಚ ಉಳಿಸುವುದಾದ್ರೆ ನಾಳೆಯಿಂದ ಲೋಕಸಭೆಯ ಅವಧಿ ೫ರಿಂದ ೧೦ ವರ್ಷಕ್ಕೆ ಎರಿಸಬೇಕಾಗುತ್ತದೆ.. ಗ್ರಾಮ ಪಂಚಾಯ್ತಿ, ನಗರ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ನಗರ ಪಾಲಿಕೆ ಚುನಾವಣೆ ಎಲ್ಲವನ್ನೂ ಒಟ್ಟಿಗೆ ನಡೆಸಬೇಕಾಗುತ್ತದೆ ಅಥವಾ ರದ್ದು ಮಾಡಬೇಕಾಗುತ್ತದೆ. ಅಷ್ಟಕ್ಕೂ ಲೋಕಸಭೆಯ ಚುನಾವಣೆಗೆ ಆದ ವೆಚ್ಚ ಅರವತ್ತು ಸಾವಿರ ಕೋಟಿಗಳು.. ಎಲ್ಲಾ ರಾಜ್ಯಗಳ ವಿಧಾನಸಭೆ ಚುನಾವಣೆಯ ಕರ್ಚಾಗಿ ಇನ್ನೊಂದು ಅರವತ್ತು ಸಾವಿರ ಕರ್ಚಾಗುವುದಾದರೆ ಅದು ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾದ ಕರ್ಚು. ಸಾವಿರಾರು ಕೋಟಿ ವೆಚ್ಚ ಮಾಡಿ ಪ್ರತಿಮೆಗಳನ್ನು ನಿಲ್ಲಿಸಲು ಮುಂದಾಗುವ ಸರ್ಕಾರಕ್ಕೆ ಇದ್ಯಾವ ಲೆಕ್ಕ!?

ಇನ್ನು ನೀತಿಸಂಹಿತೆ ನೆಪ ಹೇಳುವುದೂ ಕೂಡಾ ಜನರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನವೇ ಆಗಿದೆ. ನೀತಿ ಸಂಹಿತೆ ಜಾರಿ ಆದರೆ ಯಾವುದೇ ಹೊಸ ಯೋಜನೆಯ ಘೋಷಣೆಯನ್ನು ಚುನಾವಣೆ ನಡೆಯುತ್ತಿರುವ ಪ್ರದೇಶಕ್ಕೆ ಸಂಬಂಧಪಟ್ಟಂತೆ ಮಾಡುವಂತಿಲ್ಲ.. ಅಷ್ಟೇ ಹೊರತು ಅಭಿವೃದ್ಧಿ ಕೆಲಸ ನಿಲ್ಲಿಸಬೇಕು ಅಂತೇನಲ್ಲ..

ಒಟ್ಟಾರೆ “ಒಂದು ದೇಶ ಒಂದು ಚುನಾವಣೆ” ಎನ್ನುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ನಡೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆ.. ಜಾರಿಮಾಡಲು ಬಹಳ ಕಷ್ಟಕರವಾದ ನಡೆ. ಪ್ರಾದೇಶಿಕ ಪಕ್ಷಗಳಿಗೆ ಕೊನೆ ಹಾಡುವ ನಡೆ. – ಆನಂದ್1. https://youtu.be/zVXOWY8PjAc
2. https://youtu.be/FYWHJr0yqiM
3. https://youtu.be/dPS4WqVaRU8
4. https://youtu.be/qCvOlGqqjGk

Posted on June 19, 2019, in ಗುಂಪಿಸದ್ದು. Bookmark the permalink. Leave a comment.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: